
೨೦೨೫-೨೬ ನೇ ಸಾಲಿನ ರಾಷ್ಟಿçÃಯ ಖಾದ್ಯ ತೈಲ್ಲ ಎಣ್ಣೆಕಾಳು ಅಭಿಯಾನಸರಕಾರ ರೈತರಿಗೆ ನೀಡುವ ಯೋಜನೆಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕು: ರಾಮಣ್ಣ ಹೂವಣ್ಣವರಗದಗ : ಸರ್ಕಾರದ ವಿವಿದ ಯೋಜನೆಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷರಾದ ರಾಮಣ್ಣ ಹೂವಣ್ಣವರ ಅವರು ಹೇಳಿದರು. ಅವರು ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ೨೦೨೫-೨೬ ನೇ ಸಾಲಿನ ರಾಷ್ಟಿçÃಯ ಖಾದ್ಯತೈಲ್ಲ ಎಣ್ಣೆಕಾಳು ಅಭಿಯಾನ ಯೋಜನೆಯಲ್ಲಿ ಯೋಜನೆ ಅಡಿ ಸೂರ್ಯಕಾಂತಿ ತಳಿಯ ಕಿರುಚೀಲಗಳನ್ನು ವಿತರಣೆ ಹಾಗೂ ಕೃಷಿ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ರೈತರಿಗೆ ಸರ್ಕಾರದಿಂದ ಸಿಗುವ ಸಾಕಷ್ಟು ಯೋಜನೆಗಳ ಬಗ್ಗೆ ಸಮರ್ಪಕವಾಗಿ ಸೂಕ್ತ ಮಾಹಿತಿ ಇರುವುದಿಲ್ಲ ಈ ಕುರಿತು ರೈತರಿಗೆ ಇನ್ನಷ್ಟು ಅರಿವು ಮೂಡಿಸುವ ಕಾರ್ಯಕ್ರಮ ಆಗಬೇಕಾಗಿದೆ. ರೈತರು ಸರ್ಕಾರದ ಯೋಜನೆಗಳನ್ನು ಪಡೆಯುವ ಮೂಲಕ ಆರ್ಥಿಕವಾಗಿ ಸದೃಢವಾಗಬಹುದು. ಅಲ್ಲದೆ, ಕೃಷಿ ಇಲಾಖೆಯು ನೀಡುವ ಹಲವಾರು ಮಾಹಿತಿಗಳ ಅನ್ವಯ ರೈತರು ತಮ್ಮ ಬೆಳೆಗಳಗಳನ್ನು ರಕ್ಷಣೆ ಮಾಡಬಹುದು ಆದ್ದರಿಂದ ರೈತರು ಸರ್ಕಾರದ ಯೋಜನೆಗಳನ್ನು ಪಡೆಯಲು ಮುಂದೆ ಬರಬೇಕು ಎಂದು ಹೇಳಿದರು.ಕೃಷಿ ಅಧಿಕಾರಿಗಳಾದ ಶ್ರೀಮತಿ ಬಸವರಾಜೇಶ್ವರಿ ಸಜ್ಜನರ ಅವರು ಮಾತನಾಡಿ, ಜಿಲ್ಲೆಯಲ್ಲಿ ಎಣ್ಣೆ ಕಾಳು ಬೆಳೆಗಳ ವಿಸ್ತೀರ್ಣವನ್ನು ಹೆಚ್ಚಿಸುವುದು ಈ ಯೋಜನೆ ಮುಖ್ಯ ಉದ್ದೇಶವಾಗಿರುತ್ತದೆ. ಅಟಲ್ ಭೂ ಜಲ ಯೋಜನೆ ಅಡಿ ಸೂಕ್ಷ÷್ಮ ನೀರಾವರಿ ಘಟಕಗಳು ಲಭ್ಯವಿದ್ದು ನೀರಾವರಿ ಹೊಂದಿದ, ಕೃಷಿ ಹೊಂಡ, ಹೊಂದಿದ ಹಾಗೂ ಹಳ್ಳದ ಪಕ್ಕದಲ್ಲಿ ಜಮೀನು ಹೊಂದಿರುವ ರೈತರು ರೈತ ಸಂಪರ್ಕ ಕೇಂದ್ರ ಬೆಟಗೇರಿಗೆ ಅರ್ಜಿ ಸಲ್ಲಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.ಗದಗ ತಾಲೂಕ ಕೃಷಿಕ ಸಮಾಜದ ಉಪಾಧ್ಯಕ್ಷ ಎಂ. ಎಸ್. ಮಲ್ಲಾಪುರ ಅವರು ಮಾತನಾಡಿ, ಕೃಷಿ ಇಲಾಖೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಿ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ರೈತರಿಗೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ರೈತರಿಗೆ ಸೂರ್ಯಕಾಂತಿ ಕಿರುಚೀಲಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಚನ್ನಪ್ಪ ಹುಬ್ಬಳ್ಳಿ, ವೆಂಕಟೇಶ ದೋಂಗಡೆ, ಪ್ರಸನ್ನಗೌಡ ಮಲ್ಲಾಪೂರ, ಚಂದ್ರಗೌಡ ಪಾಟೀಲ, ಚಂದ್ರಶೇಖರ ವಸ್ತçದ, ಮಲ್ಲಿಕಾರ್ಜುನ ರಾಯಚೂರ, ಶಿವು ಟೆಂಗಿನಕಾಯಿ, ಮಹಾಂತೇಶ ಕಮತರ, ನಿಂಗಪ್ಪ ಮಣ್ಣೂರ, ಪಂಚಪ್ಪ ಬಳಿಗೇರ, ಅಂದಪ್ಪ ಮೆಣಸಿನಕಾಯಿ, ಮಂಜುನಾಥ ಸಜ್ಜನ, ಗೌರಮ್ಮ ಲಕ್ಕುಂಡಿ ಸೇರಿದಂತೆ ಲಕ್ಕುಂಡಿ ಗ್ರಾಮದ ನೂರಾರು ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.