ದೇವನಹಳ್ಳಿ ಭೂ ಸ್ವಾಧೀನ ಮಾತಿಗೆ ತಪ್ಪಿದ ಸರ್ಕಾರ , ರೈತರ ಅಕ್ರಮ ಬಂಧನ ಖಂಡನೀಯ – ರೈತ ಮುಖಂಡ ಎನ್ ಭರ್ಮಣ್ಣ

*ಕೊಟ್ಟೂರು : *- ವಿಜಯನಗರ ಜಿಲ್ಲೆ ಕೊಟ್ಟೂರು : ಕರ್ನಾಟಕ ರಾಜ್ಯ ರೈತ ಸಂಘ , ಹಾಗೂ ಹಸಿರು ಸೇನೆ ಕೊಟ್ಟೂರು ಘಟಕದ ಪದಾಧಿಕಾರಿಗಳು. ರಾಜ್ಯ ಉಪಾಧ್ಯಕ್ಷ ಎನ್ ಭರ್ಮಣ್ಣ ರವರ ನೇತೃತ್ವದಲ್ಲಿ , ತಾಲೂಕು ಪ್ರಗತಿ ಪರ ಸಂಘಟನೆ ಪಧಾದಿಕಾರಿಗಳ ಸಹಯೋಗದೊಂದಿಗೆ. ಬೆಂಗಳೂರು ದೇವನಹಳ್ಳಿ ತಾಲ್ಲೂಕಿನಲ್ಲಿ , ಕೆಐಎಡಿಬಿ ನಡೆಸುತ್ತಿರುವ ಅಕ್ರಮ ಭೂಸ್ವಾಧೀನ ಪ್ರಕ್ರಿಯೆಯನ್ನು. ಸರ್ಕಾರ ಕೂಡಲೇ ಕೈ ಬಿಡಬೇಕೆಂದು ಆಗ್ರಹಿಸಿ , ತಹಶಿಲ್ದಾರರ ಮುಖಾಂತರ ಹಕ್ಕೊತ್ತಾಯ ಪತ್ರ ನೀಡಲಾಗಿದೆ. ತಹಶಿಲ್ದಾರರಿಗೆ ಹಕ್ಕೊತ್ತಾಯ ಪತ್ರ ನೀಡದ ಸಂದರ್ಭದಲ್ಲಿ , ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಎನ್ ಭರ್ಮಪ್ಪ ಮಾತನಾಡಿದರು. ಸರ್ಕಾರದ ಅಕ್ರಮ ಭೂ ಸ್ವಾಧೀನ ಪ್ರಕ್ರಿಯೆ ಖಂಡನೀಯ , ಅದನ್ನು ವಿರೋಧಿಸಿ ರೈತರು ನಡೆಸಿದ ಚಳುವಳಿಯಲ್ಲಿ. ಯಾವುದೇ ಮುನ್ಸೂಚನೆ ನೀಡಡದೇ ಪೊಲೀಸರು ರೈತರನ್ನು ಭಂದಿಸಿರುವುದು , ಪೊಲೀಸ್ ಇಲಾಖೆಯ ಅಕ್ರಮ ನಡೆ ಹಾಗೂ ಅಮಾನುಷ ವರ್ತನೆಗೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಕರ್ಥವ್ಯಲೋಪವೆಸಗಿ ಅಕ್ರಮ , ಮತ್ತು ಅಮಾನುಷವಾಗಿ ಧರಣಿ ನಿರತ ರೈತರ ಮೇಲೆ ದೌರ್ಜನ್ಯ ನಡೆಸಿ ಧರಣಿ ಬಂಧನ ಮಾಡಿರುವುದು ಖಂಡನೀಯವಾದದ್ದು. ಈ ಲೋಪಕ್ಕೆ ಕಾರಣರಾದ ಪೊಲೀಸ್ ಉಪ ಆಯುಕ್ತರಾದ ಸಚಿತ್ ಕುಮಾ‌ರ್ ಅವರನ್ನು , ಈ ಕೂಡಲೇ ಅಮಾನತುಗೊಳಿಸಬೇಕೆಂದು ಅವರು ಸರ್ಕಾರಕ್ಕೆ ಒತ್ತಾಯಿಸಿದರು. ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ಭೂಸ್ವಾಧೀನ ಪ್ರಕ್ರಿಯೆಯನ್ನು , ಸಂಪೂರ್ಣವಾಗಿ ಕೈಬಿಟ್ಟು ಅಲ್ಲಿನ ರೈತರ ಭೂಮಿಯನ್ನು ಅವರಿಗೇ ಉಳಿಸಬೇಕು. ಮುಖ್ಯಮಂತ್ರಿಗಳು ಶೀಘ್ರವೇ ಈ ಕುರಿತು ತುರ್ತಿ ಸಭೆ ಕರೆದು , ರೈತರ ಪರ ನಿಲುವು ತಾಳಿ ಅಗತ್ಯ ಕ್ರಮ ಜರುಗಿಸಬೇಕೆಂದು ಮುಖ್ಯ ಮಂತ್ರಿಗಳಿಗೆ ಈ ಮೂಲಕ ಒತ್ತಾಯಿಸುತ್ತೇವೆ ಎಂದರು. ರೈತ ಮುಖಂಡರಾದ ಚಪ್ಪರದಳ್ಳಿ ಕೊಟ್ರೇಶಪ್ಪ, ಅಖಿಲ ಕರ್ನಾಟಕ ಕೀಸಾನ್ ಜಾಗೃತ ಸಂಘ ಜಿಲ್ಲಾ ಉಪಾಧ್ಯಕ್ಷ ಜಂಬೂರು ಮರುಳಸಿದ್ದಪ್ಪ, ಸಿ.ಪಿ ಐ ಎಮ್ ಎಲ್ ಲಿಬೆರೇಷನ್ ಪಕ್ಷದ ಜಿಲ್ಲಾ ಸದಸ್ಯ ಬಾಲಗಂಗಾಧರ, ಕರ್ನಾಟಕ ರಾಜ್ಯ ರೈತ ಸಂಘ ಪ್ರಧಾನ ಕಾರ್ಯದರ್ಶಿ ಗುಡಿಯಾರ ಮಲ್ಲಿಕಾರ್ಜುನ , ಲಿಬೇರೇಷನ್ ಪಕ್ಷದ ತಾಲೂಕು ಕಾರ್ಯದರ್ಶಿ ಕೆ ಅಜ್ಜಪ್ಪ , ಕೆ ಎಸ್ ಜಯಪ್ರಕಾಶ ನಾಯ್ಕ್ ರವರು ಮಾತನಾಡಿದರು. ತಹಶಿಲ್ದಾರರಾದ ಜಿ.ಕೆ.ಅಮರೇಶ್ ರವರಿಗೆ ಹಕ್ಕೊತ್ತಾಯ ಪತ್ರ ನೀಡಲಾಯಿತು. ಪ್ರಗತಿಪರ ಸಂಘಟನೆಗಳ ಎಲ್ಲಾ ಪಧಾದಿಕಾರಿಗಳು , ಸದಸ್ಯರು ರೈತರು ರೈತಮಹಿಳೆಯರು ಭಾಗವಹಿಸಿದ್ದರು.

✍🏻 *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ*

Leave a Reply

Your email address will not be published. Required fields are marked *