ಅಖಿಲ ಕರ್ನಾಟಕ ಹಾಗೂ ಪಿಂಚಣಿ ವಂಚಿತ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘ ಗದಗ ಜಿಲ್ಲಾ ಘಟಕ ವತಿಯಿಂದ17/12/2025 ರ ಇಂದು ಬೆಳಗ್ಗೆ ಮುಳಗುಂದ ನಾಕಾ ದಲ್ಲಿ ಸೇರಿ 17 ರ ಬೆಳಗಾವಿ ಹೋರಾಟಕ್ಕೆ ಕನಕದಾಸ ಸಮಿತಿ ಅಧ್ಯಕ್ಷರಾದ

ಶ್ರೀ ರವಿ ದಂಡಿನ ಙಾಲನೆ ನೀಡಿದರು ಈ ಸಂದರ್ಭದಲ್ಲಿ ಮಾತನಾಡುತ್ತಾ ಅನುದಾನಿತ ನೌಕರರ ಮತ್ತು ಸಂಸ್ಥೆಗಳ ಉಳಿವಿಗಾಗಿ ಹೋರಾಟ ಅನಿವಾರ್ಯ. ಸರ್ಕಾರ ತಾನು ಮಾತು ಕೊಟ್ಟಂತೆ ಹಳೆ ಪಿಂಚಣಿ ಯೋಜನೆಯನ್ನು ಶೀಘ್ರ ಜಾರಿಗೊಳಿಸಬೇಕು, ಜ್ಯೋತಿ ಸಂಜೀವಿನಿ ಅನುದಾನಿತ ನೌಕರರಿಗೆ ಜಾರಿಗೆ ತರಬೇಕು, ಇಲ್ಲವಾದರೆ ಉಗ್ರವಾದ ಪ್ರತಿಭಟನೆ ಹೋರಾಟವನ್ನು ಹಮ್ಮಿಕೊಳ್ಳುತ್ತವೆ . ಇದೇ *ಡಿಸೆಂಬರ್ 17ರ ಬುಧವಾರ* ಜಿ ಹನುಮಂತಪ್ಪ ರಾಜ್ಯಾಧ್ಯಕ್ಷರು ಅಖಿಲ ಕರ್ನಾಟಕ ಹಾಗೂ ಪಿಂಚಿಣಿ ವಂಚಿತ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘ ರಾಜ್ಯ ಘಟಕದ ಕರೆ ಮೇರೆಗೆ ಮಾಡು ಇಲ್ಲವೇ ಮಡಿ ಹೋರಾಟವನ್ನು ಹಮ್ಮಿಕೊಂಡಿದ್ದು

ಸ್ಥಳ:-ಓಲ್ಡ್ ಪಿಬಿ ರೋಡ್ ಧಾರವಾಡ ನಾಕಾ, ಟೆಂಟ್ ನಂಬರ್ 8 ಬೆಳಗಾವಿಯ ಸುವರ್ಣ ಸೌಧದ ಎದುರು ನಡೆಯುವ ಈಹೋರಾಟದಲ್ಲಿ ಗದಗ ಜಿಲ್ಲೆಯ ಅನುದಾನಿತ ಶಾಲಾ ಕಾಲೇಜುಗಳ ನೌಕರರು ಹಾಗೂ ಎರಡು ಸಂಘಟನೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಬೆಳಗಾವಿ ಚಲೋ ಯಶಸ್ವಿ ಗೋಳಿಸುತ್ತಿರವ ತಮಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು

ಈ ಸಂದರ್ಭದಲ್ಲಿ ಶ್ರೀ ಬಸವರಾಜ ಕೊರ್ಲಹಳ್ಳಿ ಜಿಲ್ಲಾ ಅಧ್ಯಕ್ಷರು ಅಖಿಲ ಕರ್ನಾಟಕ ಹಾಗೂ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ಜಿಲ್ಲಾ ಘಟಕ ಗದಗ ಶ್ರೀ ಉಮೇಶ್ ಹಿರೇಮಠ ರಾಜ್ಯಾಧ್ಯಕ್ಷರ ಪದವಿಧರ ಹಾಗೂ ಶಿಕ್ಷಕರ ಸಂಘ ಶ್ರೀ ರವಿ ಕೋಟಿಯವರ ಜಿಲ್ಲಾ ಪ್ರಧಾನ ಕಾರ್ಯದರ್ಶಿಶ್ರೀ ಈರಣ್ಣ ಹಾದಿಮನಿ ರಾಜ್ಯ ಉಪಾಧ್ಯಕ್ಷರು.ಶ್ರೀ ಎಂ ಕೆ ಲಮಾಣಿ ಗದಗ ಜಿಲ್ಲಾ ಅಧ್ಯಕ್ಷರು ಮಾಧ್ಯಮಿಕ ಶಾಲಾ ನೌಕರರ ಸಂಘ ಶ್ರೀ ಎ ಎಸ್ ಪಾಟೀಲ್ ಪ್ರಧಾನ ಕಾರ್ಯದರ್ಶಿಗಳು ಗೌರವಾಧ್ಯಕ್ಷರಾದ ವಿಎಸ್ ಕೊಳ್ಳಿ ಈ ಸಂದರ್ಭದಲ್ಲಿ ಶಶಿಧರ್ ಕುರಿ ಮಂಜುನಾಥ್ ಟಕಿನ್ಮನೆ ಪ್ರದೀಪ್ ನಾಯಕ್, ದನೇಶ್ ನಾಯಕ್ ಅಶೋಕ್ ಬಜಂತ್ರಿ , ಆರ್ ಡಿ ಪವಾರ್, ವಿ ಎಲ್ ದಲಾಲಿ , ಭಂಡಾರಿ ವಿ ಎಸ್ ಅಳವುಂಡಿ,ದೊಡಮನಿ ,ಎಂ ಎಲ್ ಪೂಜಾರ್,, ಶ್ರೀ ಡಿ ಜಿ ಪೂಜಾರ್, ಶ್ರೀ ಶಿವಯೋಗಿ ಗಡ್ಡದ್, ಶ್ರೀಮತಿ ಆರ್ ಆರ್ ಇನಾಮ್ದಾರ್, ಶ್ರೀ ಧನೇಶ್ ನಾಯಕ್, ಶ್ರೀ ಅಶೋಕ್ ಭಜಂತ್ರಿ, ಶ್ರೀ ಪಿ ಟಿ ಉಳ್ಳಾಗಡ್ಡಿ , ಶ್ರೀ ವೈ ಎಚ್ ವಾಲಿಕಾರ್, ಶ್ರೀ ಕೆ ಎಸ್ ಕಟಿಗಿ, ಶ್ರೀ ಎಸ್ ಜೆ ಪರಂಡೆ , ಶ್ರೀ ಎ ಆರ್ ಕಟ್ಟೆನವರ್ , ಮಾಧ್ಯಮಿಕ ಶಾಲಾ ನೌಕರರ ಸಂಘದ ಕಾರ್ಯದರ್ಶಿಯಾದ ಶ್ರೀ ಮಂಜುನಾಥ ತೆಗ್ಗಿನಮನಿ ಸೇರಿದಂತೆ ಗದಗ ಜಿಲ್ಲೆಯ ಅನುದಾನಿತ ಶಾಲಾ ಕಾಲೇಜುಗಳ ನೌಕರರು ಭಾಗವಹಿಸಿದ್ದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *