ಗದಗ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ

ಗದಗ (ಕರ್ನಾಟಕ ವಾರ್ತೆ) ಜೂನ್ 2 : ಸ್ವಾತಂತ್ರ್ಯ ನಂತರ ದೇಶದಲ್ಲಿ ಅತ್ಯಂತ ಯಶಸ್ಸು ಕಂಡ ಸರ್ಕಾರದಿಂದ ಅನುಷ್ಟಾನಿತ ಪಂಚ ಗ್ಯಾರಂಟಿ ಯೋಜನೆಗಳು ಅರ್ಹವಿರುವ ಕಟ್ಟ ಕಡೇಯ ಫಲಾನುಭವಿಗಳಿಗೆ ಒದಗಬೇಕು ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಹೇಳಿದರು‌ನಗರದ ಎಸಿ ಆವರಣದಲ್ಲಿರುವ ತಾಲೂಕ ಗ್ಯಾರಂಟಿ ಯೋಜನೆಗಳ ಕಾರ್ಯಲಯದಲ್ಲಿ ಸೋಮವಾರ ಜರುಗಿದ ಗದಗ ತಾಲೂಕ ಮಟ್ಟದ ಗ್ಯಾರಂಟಿ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಗೃಹಲಕ್ಷ್ಮಿ ಯೋಜನೆಯಿಂದ ರಾಜ್ಯದ ಮಹಿಳೆಯರ ಆರ್ಥಿಕ ಪರಿಸ್ಥಿತಿ ಸುಧಾರಣೆ ಗೊಂಡಿದೆ ಜಿಲ್ಲೆಯಲ್ಲಿ ಜಿ ಎಸ್ ಟಿ ಯಲ್ಲಿ ನೊಂದಾಣೆಗೊಂಡು ನಂತರ ರದ್ದು ಮಾಡಿದ ಮೇಲೂ ಗೃಹಲಕ್ಷ್ಮಿ ಯೋಜನೆಯಿಂದ ವಂಚಿತರಾದವರಿಗೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.ಇದಕ್ಕೆ ಪ್ರತಿಕ್ರಿಯೆಸಿದ ಅಧಿಕಾರಿಗಳು ಜಿ ಎಸ್ ಟಿ ಯಿಂದ ವಂಚಿತರಾದವರ ಪಟ್ಟಿಯನ್ನು ಈಗಾಗಲೇ ರಾಜ್ಯ ಕಛೇರಿಗೆ ಕಳುಹಿಸಲಾಗಿದೆ ಅಗಷ್ಟರ ಒಳಗಾಗಿ ಅವರನ್ನು ಜಿ ಎಸ್ ಟಿ ಪೋರ್ಟಲ್ ನಿಂದ ಅವರ ಹೆಸರುಗಳನ್ನು ತೆಗೆದು ಹಾಕಿ ಗೃಹಲಕ್ಷ್ಮಿ ದೊರಕುವ ಹಾಗೇ ಮಾಡುಲಾಗುವುದು ಎಂದು ತಿಳಿಸಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.ಅನ್ನಭಾಗ್ಯ ಯೋಜನೆಯ ಸಮರ್ಪಕ ಅನುಷ್ಟಾನಕ್ಕಾಗಿ ಆಹಾರ ಇಲಾಖೆಯ ಅಧಿಕಾರಿಗಳು ಪಡಿತರ ಅಂಗಡಿದಾರರ ಜೊತೆಗೆ ಸಭೆ ನಡೆಸಬೇಕು. ಅನ್ನಭಾಗ್ಯದ ಅಕ್ಕಿಯು ಅರ್ಹ ಫಲಾನುಭವಿಗಳಿಗೆ ತಲುಪಬೇಕು 1 ವರ್ಷದಿಂದ ಪಡಿತರ ಅಕ್ಕಿಯನ್ನು ಪಡೆಯದೇಯಿರುವ ಪಡಿತರ ಕಾರ್ಡಗಳ ಮಾಹಿತಿ ನೀಡಬೇಕೆಂದು ಮಾಹಿತಿ ಕೇಳಿದರು.ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಜೀವನದಲ್ಲಿ ನಿಜವಾದ ಶಕ್ತಿ ಬಂದತಾಗಿದೆ ಮಹಿಳೆಯರು ಸ್ವಾವಲಂಬನೆಯ ಬದುಕು ನಡೆಸಲು ಸಹಕಾರಿಯಾಗಿದೆ ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಹೇಳಿದರು‌.ಗದಗ ತಾಲೂಕ ಮಟ್ಟದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಅಶೋಕ ಮಂದಾಲಿ ಮಾತನಾಡಿ ಯೋಜನೆಯ ಪ್ರಗತಿಯ ಕುರಿತು ನಿಖರ ಮಾಹಿತಿ ಒದಗಿಸಬೇಕು. ಗೃಹ ಲಕ್ಷ್ಮಿ ಹಾಗೂ ಯುವ ನಿಧಿ ಯೋಜನೆಯ ಕುರಿತು ಇನ್ನೂ ಹೆಚ್ಚಿನ ಅರಿವು ಮೂಡಿಸಬೇಕು. ಗದಗ ತಾಲೂಕಿನಲ್ಲಿ ಗೃಹಲಕ್ಷ್ಮಿ ಪಡೆಯುತ್ತಿದ್ದ ಕೆಲವು ಮಹಿಳೆಯರು ಮರಣ ಹೊಂದಿದ ಹಿನ್ನಲೆಯಲ್ಲಿ ಅವರ ಹೆಸರನ್ನು ಫಲಾನುಭವಿಯ ಪಟ್ಟಿಯಿಂದ ಕೈ ಬಿಡಬೇಕು,ಹಾಗು ಜಿ ಎಸ್ ಟಿ ಯಲ್ಲಿ ನೊಂದಣಿ ಯಾಗಿ ತದನಂತರ ಜಿ ಎಸ್ ಟಿ ಯನ್ನು ರದ್ದು ಗೊಳಿಸಿದರು ಜಿ ಎಸ್ ಟಿ ನೊಂದಯಿಸಿದವರ ಪ್ಯಾನ್ ಕಾರ್ಡ ಲಿಂಕ್ ಆಗಿಯೇ ಇರುತ್ತದೆ ಹಾಗಾಗಿ ಅಂತವರಿಗೆ ಜಿ ಎಸ್ ಟಿ ಪೋರ್ಟಲ್ ನಲ್ಲಿ ತಮ್ಮ ಹೆಸರನ್ನು ಕಡಿಮೆ ಗೊಳಿಸಬೇಕೆಂದು ಮಾಹಿತಿ ನೀಡಬೇಕು ಎಂದರು ಗೃಹಲಕ್ಷ್ಮಿ ಯೋಜನೆಯ ಸಮರ್ಪಕ ಅನುಷ್ಟಾನಕ್ಕಾಗಿ ಅಂಗನವಾಡಿ ಮೇಲ್ವಿಚಾರಕಿಯರು ( ಸುಪರ್ ವೈಸರ್ ) ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಭೆ ಕರೆದು ಸರ್ವೆ ಕಾರ್ಯ ಚುರುಕುಗೊಳಿಸಬೇಕೆಂದು ಎಂದು ಅಶೋಕ ಮಂದಾಲಿ ತಿಳಿಸಿದರು. ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಬಿ ಬಿ ಅಸೂಟಿ ಮಾತನಾಡಿ ತಮ್ಮ ಗಮನಕ್ಕೆ ಬಂದ ಸಮಸ್ಯೆ ಯೊಂದರಲ್ಲಿ ಒಂದು ಮನೆಯ ಯಜಮಾನಗೃಹಜ್ಯೋತಿ ಫಲಾನುಭವಿಯಾಗಿದ್ದು ಎಷ್ಟು ಕಡಿಮೆ ವಿದ್ಯುತ್ ಉಪಯೋಗಿಸಿದರು ವಿದ್ಯುತ್ ಬಿಲ್ ಬರುತ್ತಿದೆ ಎಂದು ಸಮಸ್ಯೆ ಯನ್ನು ಸಭೆಗೆ ತಿಳಿಸಿದರು.ಇದಕ್ಕೆ ಉತ್ತರಿಸಿದ ಹೆಸ್ಕಾಂ ಅಧಿಕಾರಿಗಳು ಗೃಹಜ್ಯೋತಿ ಫಲಾನುಭವಿಗಳಿಗೆ 2022-23 ಸಾಲಿನಲ್ಲಿ ಉಪಯೋಗಿಸಿದ ವಿದ್ಯುತ್ ವನ್ನು ಮಾಪನವಾಗಿ ತೆಗೆದುಕೊಳ್ಳುತ್ತೆವೆ ಹಾಗಾಗಿ ಹಿಂದಿನ ಒಂದು ವರ್ಷ ಮನೆಯಲ್ಲಿ ಯಾರು ಇಲ್ಲದ ಕಾರಣ ಅತ್ಯಂತ ಕಡಿಮೆ ವಿದ್ಯುತ್ ಬಳಕೆಯಾಗಿದ್ದು ಸರ್ಕಾರದ ಆದೇಶದ ಅನುಸಾರ ಹಿಂದಿನ ವರ್ಷದ ವಿದ್ಯುತ್ ಬಳಕೆಯನ್ನು ಮಾಪನವಾಗಿ ತೆಗೆದುಕೊಂಡಿದರಿಂದ ಹೀಗಾಗಿದೆ ಎಂದು ಮಾಹಿತಿ ನೀಡಿದರು.ಪಂಚಗ್ಯಾರಂಟಿ ಯೋಜನೆಯ ಸಂಬಂಧಿತ ಅಧಿಕಾರಿಗಳು ಈ ಕೆಳಗಿನಂತೆ ಸಭೆಗೆ ಮಾಹಿತಿ ಒದಗಿಸಿದರು. ಗೃಹಲಕ್ಷ್ಮಿ ಯೋಜನೆಯಡಿ ಜನೇವರಿ ರವರೆಗೆ ಗದಗ ತಾಲೂಕಿನಲ್ಲಿ 80363 ನೋಂದಣಿಯಾದ ಅರ್ಜಿಗಳ ಪೈಕಿ 79531 ಅರ್ಜಿಗಳಿಗೆ ಮಂಜೂರಾತಿ ದೊರೆತಿದೆ ಮಂಜೂರಾತಿ ಗೊಂಡ ಫಲಾನುಭವಿಗಳಿಗೆ ಡಿಬಿಡಿ ಮೂಲಕ ಹಣ ಪಾವತಿಸಲಾಗಿದೆ. ಶೇಕಡ 99.28 ಪ್ರಗತಿ ಸಾಧಿಸಿದೆ. ಜಿಲ್ಲೆಯಲ್ಲಿ ವಾಕರಸಾಸಂಸ್ಥೆಯಿಂದ ಗದಗ ಘಟಕದಲ್ಲಿ 11-6-2023 ರಿಂದ 05-05-2025 ರವರೆಗೆ 9521760 ಪುರುಷ ಪ್ರಯಾಣಿಕರು ಹಾಗೂ 15627215 ಮಹಿಳಾ ಪ್ರಯಾಣಿಕರು ಸೇರಿದಂತೆ ಒಟ್ಟಾರೆ 25148975 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಶಕ್ತಿ ಯೋಜನೆಯಡಿ ಗದಗ ಘಟಕದಲ್ಲಿ 488213616 ರೂ. ಮಹಿಳಾ ಪ್ರಯಾಣಿಕರ ಆದಾಯವಾಗಿದೆ. ಅನ್ನಭಾಗ್ಯ ಯೋಜನೆಯಡಿ ಗದಗ ತಾಲೂಕಿನಲ್ಲಿ ಡಿಸೆಂಬರ್ 2024 ರ ಮಾಹೆಯಲ್ಲಿ ಗದಗ ಪಡಿತರ ಪ್ರದೇಶದಲ್ಲಿ 74596 ಬಿಪಿಎಲ್ ಕಾರ್ಡುದಾರರ ಫಲಾನುಭವಿಗಳಿಗೆ 4,0431100 ರೂ.ಗಳನ್ನು ಡಿಬಿಟಿ ಮೂಲಕ ಹಣ ಸಂದಾಯ ಮಾಡಲಾಗಿದೆ.

ಗೃಹಜ್ಯೋತಿ ಯೋಜನೆಯಡಿ 28-2-2025 ರವರೆಗೆ ಗದಗ ಗ್ರಾಮೀಣ ಉಪವಿಭಾಗದಲ್ಲಿ 53268 ಸ್ಥಾವರಗಳು ಅರ್ಹವಿದ್ದು 53060 ಸ್ಥಾವರಗಳ ನೋಂದಣಿಯಾಗಿದ್ದು ಶೇ 99.33 ರಷ್ಟು ಪ್ರಗತಿಯಾಗಿದೆ. ಯುವನಿಧಿ ಯೋಜನೆಯಡಿ ಗದಗ ತಾಲೂಕಿನಲ್ಲಿ ಜನೆವರಿ 2025 ರವರೆಗೆ 1704 ಫಲಾನುಭವಿಗಳ ನೋಂದಣಿಯಾಗಿದ್ದು 826 ಅರ್ಹ ಫಲಾನುಭವಿಗಳಿಗೆ ಡಿಬಿಟಿ ಮೂಲಕ 24,57,000 ರೂ. ವರ್ಗಾವಣೆಯಾಗಿರುತ್ತದೆ ಎಂದು ಸಂಬAಧಿತ ಅಧಿಕಾರಿಗಳು ಮಾಹಿತಿ ಒದಗಿಸಿದರು. ಸಭೆಯಲ್ಲಿ ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯರಾದ ಶಂಭು ಕಾಳೆ, ಶ್ರೀಮತಿ ಮೀನಾಕ್ಷಿ ಬೆನಕಣ್ಣವರ, ಸಂಗು ಕರಕಲಮಟ್ಟಿ, ನಿಂಗಪ್ಪ ದೇಸಾಯಿ, ಸಂಗಮೇಶ ಹಾದಿಮನಿ, ರಮೇಶ ಹೊನ್ನಿನಾಯ್ಕರ್ , ದೇವರೆಡ್ಡಿ ತಿರ್ಲಾಪುರ, ಮಲ್ಲಪ್ಪ ದಂಡಿನ, ಗಣೇಶ ಸಿಂಗ್ ಮಿಟಾಡ, ಮಲ್ಲಪ್ಪ ಬಾರಕೇರ, ಭಾಷಾ ಮಲ್ಲಸಮುದ್ರ, ಸಾವಿತ್ರಿ ಹೂಗಾರ, ಶರೀಫ್, ತಾಲೂಕು ಪಂಚಾಯತ್ ಮ್ಯಾನೇಜರ್ ರುದ್ರಪ್ಪ ಬಾವಿ, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನಿತ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *