ಕೆಲಸಕ್ಕೆ ಬಾರದ ಇಂಡಿ ಸಿ. ಡಿ. ಪಿ. ಓ ಅವರನು ಕೂಡಲೇ ಇಲ್ಲಿಂದ ವರ್ಗಾವಣೆ ಮಾಡಿ ಇಲ್ಲಾ ಹೋರಾಟ ಮಾಡುವದು ಅನಿವಾರ್ಯ ವಾಗುತ್ತದೆ.

ಇಂಡಿ:ಭಾರತ ಸರ್ಕಾರ ಮಹಿಳೆಯರು ಮತ್ತು ಮಕ್ಕಳ ಸಮಗ್ರ ಅಭೀವೃದ್ಧಿಯನ್ನು ಉತ್ತೇಜಿಸುವ ಸಲುವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಸ್ಥಾಪಿಸಲಾಗಿದೆ. ಆದರೆ ನಮ್ಮ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃಧಿ ಯೋಜನಾಧಿಕಾರಿಗಳಾದ ಗೀತಾ ಗುತ್ತರಗಿಮಠ ಇವರು ಸರಿಯಾಗಿ ಕಾರ್ಯಾಲಯಕ್ಕೆ ಬರುವುದಿಲ್ಲ. ಸರ್ಕಾರದ ಆದೇಶದ ಪ್ರಕಾರ ಇವರು ಮೂಲ ಸ್ಥಾನದಲ್ಲಿ ಇರಬೇಕು ಆದರೆ ಇವರು ಇಲ್ಲಿ ಮೂಲಸ್ತಾನದಲ್ಲಿ ಇರುವುದಿಲ್ಲ. ಇವರ ಬಗ್ಗೆ ಮೇಲಾಧಿಕಾರಿಗಳಿಗೆ ಹೇಳಿದರು ಯಾವುದೇ ಪ್ರಯೋಜನ ವಾಗುತ್ತಿಲ್ಲ,ಸರಿಯಾಗಿ ಆಹಾರ ಪೋರೈಕೆ ಮಾಡುತ್ತಿಲ್ಲ ಇದರ ಬಗ್ಗೆ ದೂರು ಹೇಳೊದಕ್ಕೆ ಕರೆ ಮಾಡಿದರೆ ಕರೆಗೆ ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ ತಿಂಗಳಿಗೆ ಏಳರಿಂದ ಎಂಟು ಬಾರಿ ಮಾತ್ರ ಆಪಿಸಿಗೆ ಬರುತಾರೆ ಉಳಿದ ದಿನ ಬರೋದೆ ಇಲ್ಲ.ತಾಲೂಕಿನಾದ್ಯಂತ ಪ್ರತಿಯೋಂದು ಅಂಗನವಾಡಿ ಕಾರ್ಯಕರ್ತೆಯರಿಗೆ ತತ್ತಿ ಹಣ ಜಮೆಯಾದರೆ ಅವರಿಂದ ಅದ್ರಲ್ಲಿ 30 ರಿಂದ 35%, ಹಣ ತೇಗೆದು ಕೊಳೊದು ರೂಢಿಯಾಗಿದೆ ಮತ್ತು ಕಡಿಮೆ ಆಹಾರ ಪದಾರ್ಥಗಳು ಕೋಡೊದು ಅದರಲ್ಲಿ ಉಳಿದ ಆಹಾರ ಪದಾರ್ಥದ ಬದಲು ಹಣ ತೇಗೆದು ಕೋಳೊದು ಮಾಡುತ್ತಿದ್ದಾರೆ ಇದರ ಬಗ್ಗೆ ಉಪ ನೀರ್ದೆಶಕರು ವಿಜಯಪುರ ಇವರಿಗೆ ಹೇಳಿದ್ರು ಏನು ಪ್ರಯೋಜನ ವಾಗುತ್ತಿಲ್ಲ. ಇಲ್ಲಿನ ಸಾರ್ವಜನಿಕರಿಗೆ ತುಂಬಾ ತೋಂದರೆಯಾಗುತ್ತಿದೆ ಇವರು ಕೇಲಸಕ್ಕೆ ಬರದೆ ಇವರಿಗೆ ಕಾಯೋದೆ ಹೆಚ್ಚಾಗಿದೆ ಅಂತಾ ಹೇಳುತ್ತಿದ್ದಾರೆ ಇಲ್ಲಿನ ಸಾರ್ವಜನಿಕರು. ಇವರ ಬಗ್ಗೆ ನೀವು ಯಾರಿಗೆ ಬೇಕಾದ್ರು ಕಂಪ್ಲೆಂಟ ಮಾಡಿದ್ರು ಏನು ಪ್ರಯೋಜನ ವಾಗುವುದಿಲ್ಲ ಅನುತ್ತಿದ್ದಾರೆ, ಏಕೆಂದರೆ ಇವರಿಗೆ ಮೇಲಾಧಿಕಾರಿಗಳು ಅವರಿಗೆ ಬೆಂಬಲವಾಗಿ ನೀಲುತ್ತಾರೆ ಅಂತ ಹೇಳುತ್ತಿದಾರೆ. ಹೀಗಾಗಿ ಈ ಜಿಲ್ಲೆಯಲ್ಲಿ ಮತ್ತು ಇಂಡಿ ತಾಲೂಕಿನಲ್ಲಿ ಇವರು ಇರೊದಕ್ಕೆ ಅರ್ಹರಲ್ಲ,ಜಿಲ್ಲಾಧಿಕಾರಿಗಳು ವಿಜಯಪುರ ಮುಖ್ಯ ಕಾರ್ಯನೀರ್ವಾಹಕ ಅಧಿಕಾರಿಗಳು ಜಿ.ಪಂ ವಿಜಯಪುರ ರವರು, ಶಿಶು ಅಭಿವೃಧಿ ಯೋಜನಾಧಿಕಾರಿಗಳಾದ ಗೀತಾ ಗುತ್ತರಗಿಮಠ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಇವರನ್ನ ಈ ತಾಲೂಕಿನಿಂದ ಈ ಕೂಡಲೆ ಇವರನು ಇಲ್ಲಿಂದ ಬೇರೆಕಡೆ ವರ್ಗಾವಣೆ ಮಾಡಬೇಕು . ಇಲ್ಲವಾದಲ್ಲಿ ಹೋರಾಟ ಮಾಡುವುದು ಅನಿವಾರ್ಯ ವಾಗುತ್ತದೆ.

*ಚಂದ್ರಶೇಖರ ಮೇಲಿನಮನಿ* *ರಿಪಬ್ಲಿಕನ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ) ತಾಲೂಕು ಅಧ್ಯಕ್ಷರು ಇಂಡಿ.*

Leave a Reply

Your email address will not be published. Required fields are marked *